ಸುಂದರಿ
ಸುಂದರಿ ರಂಗನ ತಂದು ತೋರ
ಒಂದಾರ ಘಳಿಗ್ಯಾಗಾ|| ಪ ||
ಮತ್ಸ್ಯನಾಗಿ ಮೊದಲಿನಲ್ಲಿ , ಕೂರ್ಮನಾಗಿ ಬಂದು,
ಕೊರೆನು ಕಾಯ್ದ ದೈತ್ಯರ ಕೊಂದ ಬಹು ಕ್ರೋಧದಿಂದ |
ದುರುಳ ಹಿರಣ್ಯಕನ ಕರುಳು ಬಗೆದು ತೋಡಿ
ಕೊರಳೊಳಗೆ ಧರಿಸಿದನು ಸರಗಳನ್ನೇ ಮಾಡಿ |
ಕೊರಳು ಕೊಯ್ದ ಎಲ್ಲಮ್ಮನ ಪುತ್ರನಾಗಿ ಕಾದಿ |
ಸರಳ ಬಾಣವನ್ನೇ ಹೂಡಿ ಲಂಕಾದ್ರಿ ಮಥನ ಮಾಡಿ |
ಎರಳ ಗಂಗೆಯರ ಪತಿವೃತೆಯರ ಕೆಡಿಸಿದನು ಕೂಡಿ |
ಮರಳು ತನದಿಂದ ಸೆಗೆದ ಹಯವನೇರಿ ಓಡಿ ||ಸುಂದರಿ||
ನೀರೊಳು ಮೀನನಾಗಿ ಅಲೆವ, ಧರೆ ಭಾರವನ್ನು ಹೊರುವ |
ವರಹನಾಗಿ ನರಕಾಸುರನನು ತರೆವ, ಕೋರೆಲಿ ಮಣ್ಣು ಬಗೆವ |
ಒಡೆ ಮುಡಿ ಕಂಬದಿಂದ ಘುಡಘುಡಿಸುತ ಬರುವ |
ಧೃಢವುಳ್ಳ ಬಲಿಚಕ್ರವರ್ತಿ ಪಾಲಿಸಿದ ವರವಾ |
ಕೊಡಲಿ ಪಿಡಿದು ಹಡೆದ ತಾಯಿ ಶಿರವಾ ಕಡಿತಾಲಿರುವ |
ಮಡದಿ ಒಯ್ದ ರಾವಣನ ಕಡೆದು ದಶ ಶಿರವಾ |
ದಾಡಿ ಬಿಟ್ಟು ತಿರುಗುವಂಥ ತ್ರಿಪುರರರಂಥಪುರವಾ |
ಏರಿಸಿದ ಅಶ್ವಮೇಧ ಅರ್ಥಿಯಿಂದ ಮೆರೆವಾ ||ಸುಂದರಿ||
ಬ್ರಹ್ಮಗೆ ಒಲಿದು ವೇದವ ತರುವ, ಬ್ರಹ್ಮಾಂಡವನ್ಹೊರುವ |
ಗಮ್ಮೀಲಿ ಕಾಯ್ದವ,ನಾಗಿರುವ, ಸುಮ್ಮನೆ ಹೋಗಿ ಬರುವಾ |
ಸಿಟ್ಟಿನಿಂದ ನಾರಸಿಂಹ ರೂಪನಾಗಿ ಬಂದ |
ಸೃಷ್ಟಿಯೊಳು ಪರಶುರಾಮ ರೇಣುಕೆಯ ಕಂದ |
ಕಷ್ಟವನ್ನಾಚರಿಸಿದನು ರಾಮ ವನವಾಸದಿಂದ |
ಕೃಷ್ಣಾವತಾರ ಬೌದ್ಧ ಕಲ್ಕಿ ರೂಪ ಒಂದೊಂದಾ |
ಇಷ್ಟುಪರಿ ವರ್ಣಿಸುತ ಹತ್ತಾವತಾರ ಚೆಂದ |
ಸೃಷ್ಠಿಯೋಳು ಕಾಗಿನೆಲೆ ಆದಿಕೇಶವನಿಂದಾ ||ಸುಂದರಿ||
Comments
Post a Comment