ಬೇಡಿಕೊಂಬೆನು ನಾ
ಬೇಡಿಕೊಂಬೆನು ನಾ
ನೀ ಎಮ್ಮ ಪಾಲಿಸೋ ತಾಯೇ ||ಪ||
ಕರಗಳ ಜೋಡಿಸುವೆ ನಾನು ಶಿರವ ಬಾಗುವೆನು |
ನಿನ್ನಾ ಚರಣಕೆರಗುವೆನು, ತಾಯೇ ||ಬೇಡಿ||
ಸದಾನಂದದಲೀ ನಿನ್ನ ಪಾದ ಕಮಲವನು |
ನಿತ್ಯಾ ಬಿಡದೆ ಪೂಜಿಪೆನು, ತಾಯೇ ||ಬೇಡಿ||
ಮಥುರಾಪುರನಿಲಯೇ ಮೀನಾಕ್ಷಿ ಮಹಿಷಮರ್ಧಿನಿಯೇ |
ದೇವೀ ಮುಕ್ತಿದಾಯಕಿಯೇ, ತಾಯೇ ||ಬೇಡಿ||
Comments
Post a Comment