ಬಾಯಿ ನಾರಿದ ಮೇಲೆ

 

ಬಾಯಿ ನಾರಿದ ಮೇಲೆ ಏಕಾಂತವೆ 
ತಾಯಿ ತೀರಿದ ಮೇಲೆ ತವರಾಸೆಯೆ        ।।ಪ॥ 

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ 
ಬಣ್ಣಗುಂದಿದ ಮೇಲೆ ಬಹುಮಾನವೆ |
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ |
ಸುಣ್ಣವಿಲ್ಲದ ವೀಳ್ಯವದು ಸಾರತನವೇ         ।।ಬಾಯಿ।।

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ 
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ |
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ |
ಭಕ್ತಿಯಿಲ್ಲದ ನರಗೆ ಮುಕ್ತಿಯು ಉಂಟೆ?         ।।ಬಾಯಿ।।

Comments

Popular Posts