ಯೋಗಿ ಮನೆಗೆ ಬಂದಾ
ಯೋಗಿ ಮನೆಗೆ ಬಂದಾ
ಶ್ರೀಗುರು ರಾಯ ಮನೆಗೆ ಬಂದ || ಪ ||
ಕಾಲಲಿ ಪಾದುಕೆ , ಕೈಯಲಿ ದಂಡ
ಬಾಲ ರವಿಯ ಕಳೆಯ || ಪ ||
ಮಸ್ತಕದಲಿ ಜಟೆ ಶೋಭಿಸುತಲು
ಕಸ್ತೂರಿ ತಿಲಕ ಚಂದನ ಹಣೆಯಲ್ಲಿ |
ವಿಸ್ತರ ನಗು ಮುಖದಾ ||ಯೋಗಿ||
ಜೋಲುತಿರಲು ಕೊರಳೊಳು ರುದ್ರಾಕ್ಷಿ
ಜೋಳಿಗೆ ಬಗಲಲ್ಲಿ ತ್ರೈಲೋಕ ರಕ್ಷಾ |
ಕಾಶಾಯಾಂಬರದಾ ||ಯೋಗಿ||
ಭಕ್ತ ಕಾಮಕಲ್ಪ ದೃವನೀತ
ನೀನೇ ಸಚ್ಚಿದಾತ್ಮ ಶ್ರೀ ಗುರುದತ್ತಾ |
ಶಂಕರ ಗುರು ರೂಪಾ ||ಯೋಗಿ||
Comments
Post a Comment