ಕರೆದರೆ ಬರಬಾರದೆ

 

ಕರೆದರೆ ಬರಬಾರದೆ

ಗುರುವಾರ ಶ್ರೀ ರಾಘವೇಂದ್ರ,  ಕರೆದರೆ ಬರಬಾರದೆ ||ಪ||    


ವರಮಂತ್ರಾಲಯ ಪುರಮಂದಿರ ತವ |

ಚರಣ ಸೇವಕರು ಕರವ ಮುಗಿದು ನಿನ್ನ ||ಕರೆದರೆ||


ಹರಿದಾಸರು ಸುಸ್ವರ ಸಮ್ಮೇಳದಿ |

ಪರವಶದಲಿ ಬಾಯ್ದೆರೆದು ಕೂಗಿ ನಿನ್ನ ||ಕರೆದರೆ||


ಪೂಶರಪಿತ ಕಮಲೇಶ ವಿಠ್ಠಲನ

ದಾಸಾಗ್ರೇಸರೀ ಸಮಯದಿ ನಿನ್ನ ||ಕರೆದರೆ||

Comments

Popular Posts