ಏನು ಸಾಧನ ಮಾಡಿ
ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ ||ಪ||
ಕೊಳಲು, ಕರವ ಸೇರಿತೋ
ಸಾನುರಾಗದಿ ಶ್ರವಣ ಮನನ ಧ್ಯಾನಗೈದಿತೋ, ಬಹುಜನ್ಮದಿ ||ಅ ಪ||
ಮುರಮಥನನ ಅಭಯಕರದ ವರಪ್ರಸಾದವ ಕಮಲೋಧ್ಭವ |
ಸ್ಮರರಿಪುಮುಖ ಸುರರು ಬೇಡಲು ದೊರೆಯದೀ ವಿಭವ |
ಸ್ಮರರಿಪುಮುಖ ಸುರರು ಬೇಡಲು ದೊರೆಯದೀ ವಿಭವ, ವಂಶೋಧ್ಭವ ||ಏನು ||
ತ್ರಾಣವೇಣು ಮುರಳಿಗೆ ಶ್ರೀಹರಿಯ ವದನದೊಳು ಸುದೆ ಸವಿಯಲು |
ಶ್ರೀ ನರಸಿಂಹನ ರಾಣಿ ತಾನೆ ವೇಣುರಂಧ್ರದೊಳು ನಿಂತಿರುವಳು ||ಏನು ||
Comments
Post a Comment