ಎಲ್ಯಾಡಿ ಬಂದೆ

 

ಎಲ್ಯಾಡಿ ಬಂದೆ ಎನ್ನ ಕ್ರಷ್ಣಯ್ಯ
ನೀ ಎಲ್ಯಾಡಿ ಬಂದೆ ಎನ್ನ ರಂಗಯ್ಯ ||ಪ||

ಬಾಲಯ್ಯ ನೀನೆನ್ನ ಕಣ್ಣ ಮುಂದಾಡದೆ ||ಅ ಪ||

ಆಲಯದೊಳಗೆ ನೀನಾಡದೆ
ಬೆಣ್ಣೆ ಪಾಲು ಸಕ್ಕರೆ ನೀ ಬೇಡದೆ |
ಇಲ್ಲಿ ಬಾಲರಿಂದೊಡಗೂಡಿ ಆಡದೆ |
ಮುದ್ದು ಬಾಲಯ್ಯ ನೀನೆನ್ನ ಕಣ್ಣ ಮುಂದಾಡದೆ  ||ಎಲ್ಯಾಡಿ||

ಬಟ್ಟ ಮುತ್ತಿನ ಬೊಗಸೆ ಕಂಗಳು
ಹಣೆಯೊಲಿಟ್ಟ ಕಸ್ತೂರಿ ತಿಲಕದಂದವು |
ದಿಟ್ಟತನದಿ ಓಡ್ಯಾಡಲು |
ಪುಟ್ಟ ಕ್ರಷ್ಣಯ್ಯ  ನೀನೆನ್ನ ಕಣ್ಣ ಮುಂದಾಡದೆ ||ಎಲ್ಯಾಡಿ||

ಅಷ್ಠ ಧಿಕ್ಕಿಲಿ ಅರಸಿ ಕಾಣದೆ
ನಾ ದ್ರಿಷ್ಟಿ ಕೆಟ್ಟೆನೊ ನಿನ್ನ ನೋಡದೆ |
ಇನ್ನೆಷ್ಟು ಹೇಳಲಿ ಕೇಳ ಬಾರದೆ |
ರಂಗ ವಿಠ್ಠಲ ನೀನೆನ್ನ ಕಣ್ಣ ಮುಂದಾಡದೆ ||ಎಲ್ಯಾಡಿ||
 

Comments

Popular Posts