ಲೊಳಲೊಟ್ಟೆ

 

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ    ।।ಪ॥ 

ಆನೆ ಕುದುರೆ ಒಂಟೆ ಲೊಳಲೊಟ್ಟೆ 
ಬಲು ಸೇನೆ ಭಂಡಾರವು ಲೊಳಲೊಟ್ಟೆ |
ಮಾನಿನಿಯರ ಸಂಗ ಲೊಳಲೊಟ್ಟೆ 
ದೊಡ್ಡ ಕ್ಷೋಣಿಶನೆಂಬುದು ಲೊಳಲೊಟ್ಟೆ    ।।ಲೊಳಲೊಟ್ಟೆ।।

ಮುತ್ತು ಮಾಣಿಕ್ಯ ಲೊಳಲೊಟ್ಟೆ  
ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ |
ಸುತ್ತಗಲ ಕೋಟೆ ಲೊಳಲೊಟ್ಟೆ 
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ     ।।ಲೊಳಲೊಟ್ಟೆ।।

ಕಂಟಕರೆಂಬೋರು ಲೊಳಲೊಟ್ಟೆ 
ನಿನ್ನ ನಂಟರು ಇಷ್ಟರು ಲೊಳಲೊಟ್ಟೆ |
ಉಂಟಾದ ಗುಣನಿಧಿ ಪುರಂದರವಿಠಲನ 
ಬಂಟನಾಗದವ ಲೊಳಲೊಟ್ಟೆ   ||ಲೊಳಲೊಟ್ಟೆ|| 

Comments

Popular Posts