ವಂದೇ ಓಂಕಾರ

 

ವಂದೇ ಓಂಕಾರ ಚಾಮರಕರ್ಣನೇ  ಶಂಕರ ಸುತ ಶರಣು 
ವಿನಾಯಕ  ಮಂಗಳವರ ಶರಣು ||ಪ||

ಮಧೂರು ಗಣಪತಿ , ಶರವೂರು ಗಣಪತಿ ,ಕುಂಭಾಶಿ ಗಣಪತಿ ಶರಣು 
ಹಟ್ಟಿಯಂಗಡಿ ಗಣಪತಿ , ಇಡಗುಂಜಿ ಗಣಪತಿ ,ಗೋಕರ್ಣ ಗಣಪತಿ ಶರಣು ||ಅ ಪ||

ಸುಮುಖನೆ, ಕಪಿಲನೆ, ಏಕದಂತನೇ
ಶುಭವರ್ಣ, ಗೌರಿಸುತನೇ |
ನೀನಲ್ಲದೆ ಎನಗಾರು ಸಖರಿಲ್ಲವೋ
ಬಾಂದವರಿಲ್ಲವೋ , ಕಾಯುವರಿಲ್ಲವೋ ||ಮಧೂರು|| ||ವಂದೇ|| 

ನಿಕಟನೇ, ವಿಮಲನೇ, ಧೂಮ್ರವರ್ಣನೇ 
ಗಣನಾಥ ನಿನಗೆ ವಂದನೆ |
ನಿನ್ನನೇ ಎಂದೆಂದು ಸ್ತುತಿ ಮಾಡುವೆ
ಹಾಡಿ ಕೊಂಡಾಡುವೆ  ಪೂಜೆ ವೃತ ಮಾಡುವೆ ||ಮಧೂರು|| ||ವಂದೇ||  

Comments

Popular Posts