ಶಂಕರಾ.....ಪಾರ್ವತಿ ಪರಮೇಶ್ವರ

 

ಶಂಕರಾ.....ಪಾರ್ವತಿ ಪರಮೇಶ್ವರ....

ಪಂಕಜ ಜಾಪಹರ....ಮಹೇಶ್ವರ...||ಪ||


ಕಿಂಕರ ವರದ ಭಯಂಕರ ಪುರಹರ ರುಂಡಮಾಲಾಧರ |

ಸಂತರ ಪಾಲಕ ಭಕುತರ ಪೋಷಕ ತಾಂಡವ ನೃತ್ಯಕರ |

ಗೌರಿಶಂಕರ ಗೌರವ ಶುಭಕರ ಧೀರ ವಿಶ್ವೇಶ್ವರ |

ಮಾರಹರ ತ್ರಿಶೂಲಧರ ಹೇ ಚಂದ್ರಮೌಳೇಶ್ವರ ||ಶಂಕರಾ||


ಅಂಧಕದಮನ ಪುರಂದರ ಸುಮನಸ ವಂದಿತ ಗುಣನಿಕರ |

ನಂದೀ ವಾಹನ ಮಂದಾರ ಪ್ರಿಯ ನೀಲಕಂಠೇಶ್ವರ |

ಭಸ್ಮ ಭೂಷಣ ನಾಗಾಭರಣ ಮಹಾಲಿಂಗೇಶ್ವರ |

ಬಿಲ್ವ ಪಾತ್ರದಿ ಶೋಭಿಪ ಶಂಭು ಅಗ್ನಿನೇತ್ರದರ ||ಶಂಕರಾ||


ಗಜಚರ್ಮಾಂಬರ ಗಿರಿಜಾವಲ್ಲಭ ಉಮಾಮಹೇಶ |

ಅಜಹರಿ ವಿನುತ ಜಾತಾಮಕುಟಧರ ಕೈಲಾಸವಾಸ |

ವಿದ್ಯಾ ಪೋಷಕ ಬುದ್ಧಿಪ್ರದಾಯಕ ದುರಿತ ಅಘನಾಶ |

ವಿದ್ಯಾಧರ ಮುನಿ ಪೂಜಿತ ಈಶ್ವರ ಇಡ್ಯಾಪುರವಾಸ ||ಶಂಕರಾ|| 

Comments

Popular Posts