ಧೂಪಾರತಿಯ ನೋಡುವ ಬನ್ನಿ

 

ಧೂಪಾರತಿಯ ನೋಡುವ ಬನ್ನಿ 

ನಮ್ಮಗೋಪಾಲಕೃಷ್ಣ ದೇವರ ಪೂಜೆಯ ||ಪ||


ಮದ್ದಳೆ ಝಾಗಟೆ ತಾಳ ದಂಡಿಗೆ ಭೇರಿ

ತದ್ಧಿಮಿ ಧಿಮಿಕೆಂದು ರಭಸಗಳು |

ಅದ್ಭುತ ಶಂಖ ನಾದಗಳಿಂದಲಿ ನಮ್ಮ

ಪದ್ಮನಾಭ ದೇವರ ದಿವ್ಯಪೂಜೆಯ ॥ ಧೂಪಾರತಿಯ ॥


ಅಗರು ಚಂದನ ಧೂಪ ಗುಗ್ಗುಳ ಸಾಂಬ್ರಾಣಿ 

ಮಘಮಘಿಸುವ ಧೂಪದಾರತಿಯು | 

ಮಿಗಿಲಾದ ಏಕಾರತಿ ಭಕ್ತಿಯಲಿ ನಮ್ಮ 

ಜಗನ್ನಾಥವಿಠಲ ದೇವರ ಪೂಜೆಯ ॥ ಧೂಪಾರತಿಯ ॥


ಹರಿಸರ್ವೋತ್ತಮನ ಭಕ್ತರಾಧಾರನ 

ಪರಮ ಮಂಗಳ ಮೂರ್ತಿ ಪಾವನನ |

ಪರದೈವವಾದಂಥ ಶ್ರೀರಂಗನಾಥನ 

ಪುರಂದರ ವಿಠಲನ ದೇವರ ಪೂಜೆಯ ॥ ಧೂಪಾರತಿಯ ॥

Comments

Popular Posts