ನಿನ್ನ ನಂಬಿದೆ ಶಾರದೆ
ನಿನ್ನ ನಂಬಿದೆ ಶಾರದೆ
ಭಕ್ತಗೆ ಮತಿಯನ್ನು ಪಾಲಿಸಬಾರದೇ ||ಪ||
ಚೆನ್ನಾಗಿ ವಿಧ್ಯೆಯ ಕಲಿತು ಮರೆಯದಂತೆ
ಎನ್ನ ಹೃತ್ಕಮಲದೊಳ್ ನೆಲೆಸಿರು ಅನುದಿನ ||ಅ ಪ||
ಆರು ಶಾಸ್ತ್ರ ಪುರಾಣದ ಅರ್ಥಾನುಭಾವ
ತೋರಿಸೆನ್ನನು ಸರ್ವದಾ |
ನೀರು ನದಿಯೊಳು ಹರಿವಂತೆ ಚತುರ್ವೇದ
ಸಾರವ ಅರುಹೆನ್ನ ಜಿಂಹೆಯೊಳ್ ನೆಲೆಸಿರು ||ನಿನ್ನ||
ಧರ್ಮತತ್ವವು ಕೂಡಿರ್ದ
ವೇದಾಂತದ ಮರ್ಮ ಸಾರವು ಸರ್ವದಾ |
ಧರ್ಮಕರ್ಮಗಳೊಳು ಮರ್ಮವ ಅರಿವಂತೆ
ನಿರ್ಮೋಹವಿಡದೆ ಸದ್ಧರ್ಮದಿಂ ಪೊರೆಯೆನ್ನ ||ನಿನ್ನ||
ಸಾದು ಸನ್ಮತಿಯ ಕೊಡು
ಯಾವಾಗಲೂ ಮದುರ ವಚನ ನೀಡು|
ವಾದತರ್ಕದೊಳು ಸೋಲದೆ ಇರುವಂತ
ಆದಿ ಶೃಂಗೇರಿ ಶ್ರೀಶಾರದೆ ಕೃಪೆ ತೋರು ||ನಿನ್ನ||
Comments
Post a Comment