ಶ್ರೀನಿಕೇತನ
ಶ್ರೀನಿಕೇತನ ಪಾಲಯ ಮಾಂ ಶ್ರೀನಿಕೇತನ ||ಪ||
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ-
ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ||
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ |
ನೀನೆಂದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ ||ಶ್ರೀನಿಕೇತನ||
ಶ್ರೀಕರಾರ್ಚಿತ ಪಾದಾಬ್ಜ ಪರಾಕು ಅಚ್ಯುತ |
ಶೋಕನಾಶನ ವಿಶೋಕಜನಕ
ಹೃದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||ಶ್ರೀನಿಕೇತನ||
ಪನ್ನಗಾಚಲನಿವಾಸ ಪ್ರಪನ್ನ ವತ್ಸಲ |
ಬಿನ್ನಪ ಕೇಳೊ ಜಗನ್ನಾಥವಿಠ್ಠಲ
ಧನ್ಯನ ಮಾಡೊ ಶರಣ್ಯ ಶರಣನಾ ||ಶ್ರೀನಿಕೇತನ||
Comments
Post a Comment