ರಾಮನ ಪೂಜಿಸಲಿಲ್ಲ
ರಾಮನ ಪೂಜಿಸಲಿಲ್ಲ , ಮೈಮರೆತೆನಲ್ಲ || ಪ ||
ಬಾಲತ್ವದಲಿ ಬಲು ಲೀಲೆಯಿಂದಲಿ ನಾನು |
ಕಾಲವ ಕಳೆದೆನಲ್ಲ, ಮೈಮರೆತೆನಲ್ಲ || ರಾಮನ ||
ಸತಿಸುತರೆ ಎನಗೆ ಗತಿಯೆಂದು ತಿಳಿದು ನಾ |
ಮತಿಗೆಟ್ಟು ಭ್ರಾಂತನಾದೆನಲ್ಲ, ಮೈಮರೆತೆನಲ್ಲ ||ರಾಮನ ||
ಹೊನ್ನಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲ
ಚೆನ್ನಕೇಶವನ ನಂಬಲಿಲ್ಲ, ಮೈಮರೆತೆನಲ್ಲ || ರಾಮನ ||
Comments
Post a Comment