ಎಂಥಾ ಶ್ರೀಮಂತ
ಎಂಥಾ ಶ್ರೀಮಂತಾನಂತನೋ |
ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ
ಮೊಮ್ಮಗ ಶಣ್ಮಶಿರಮ್ಮಪರಮ್ಮ
ಅಮ್ಮರಸಮ್ಮೋಹ ನಿಮ್ಮಣುಗಮ್ಮರು
ನಮ್ಮೊ ನಮ್ಮ ಪರಮ್ಮ ಮಹಿಮ್ಮ ||ಅ ಪ||
ಅಂಗರು ಹೆಂಗಳ ಅಂಗನಂತಗಡ
ಮಂಗಳ ಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ
ಜಗದಘಂಗಳ ಘಂಗಳ ಹಿಂಗಿಪಳಾಂಗಾ |
ಪನ್ನಗಪನ್ನಶಯನ್ನ ಮಹೋನ್ನತ
ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||ಎಂಥಾ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ
ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ
ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||ಎಂಥಾ||
ಅಂಬರ ದುಂಬಿಗೆ ತುಂಬೆ
ವಿಶ್ವಂಬಸುರದಿಂಬಿಲಿ
ನಿಂಬಿಟ್ಟುಕೊಂಬ ಕೃಪಾಂಬುಧಿ |
ಇಂಬಕದಂಬಕಬಿಂಬ ಪ್ರಸನ್ವೇಂಕಟಾ...
ನಂಬಿದ ಬಿಂಬನಿವನೆಂಬ ಕುಟುಂಬಿ ||ಎಂಥಾ ||
Comments
Post a Comment