ನುಡಿ ಮನವೇ
ನುಡಿ ಮನವೇ ಶಿವನಾ ನಾಮಾವಳಿ |
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ||ಪ||
ಇದುವೇ ಪರಮ ಭಕ್ತದ ಸಾರವು ||ಅ ಪ||
ಚಂದ್ರಶೇಖರ ಸಲಹೋ ಎನ್ನುತ |
ವಂದಿಸಿ ಕೂಗಲು ಓಡುತ ಬರುವ |
ಭವಸಾಗರವ ದಾಟಿಸಿ ಕಾಯುವ ||ನುಡಿ||
ದೇವನ ರೂಪವು ಕಣ್ಣೊಳು ತುಂಬಿ |
ಜೀವನವೆಂಬುದು ಚಿನ್ಮಯವಾಗಲಿ |
ಜನ್ಮ ಜನ್ಮದಾ ಬವಣೆಯ ಬೇಗೆ |
ಮರಳಿ ಮರಳಿ ಬಾರದು ನಿನಗೆ ||ನುಡಿ||
Comments
Post a Comment