ಸದಾ ಎನ್ನ ಹೃದಯದಲ್ಲಿ

 

 ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀ ಹರಿ
ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನೋ             ।।ಪ।।

ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ |
ವೇಣು ಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೇನೋ     ।।ಸದಾ।।

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದಾ ಹರಿವಾಣದಿ |
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೋ               ।।ಸದಾ।।

ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ |
ಘನ್ನ ಮಹಿಮ ವಿಜಯವಿಠಲ ನಿನ್ನ ಭಕುತರ ಕೇಳೋ ಸೊಲ್ಲ        ।।ಸದಾ।।


Comments

Popular Posts