ಮಂಗಳಂ

 

ಮಂಗಳಂ ಜಯ ಶುಭ ಮಂಗಳಂ ||


ಮಂಗಳ ವಿದ್ಯಾಧರ ನುತಗೆ |

ಮಂಗಳ ಮನುಮುನಿ ವಂದಿತಗೆ |

ಮಂಗಳ ಭಕ್ತ ಜನಂಗಳ ಪೊರೆಯುವ |

ಮಂಗಳ ಮಹಾಲಿಂಗೇಶ್ವರಗೆ ||


ಜಯ ಮಂಗಳಂ ನಿತ್ಯ ಶುಭ ಮಂಗಳಂ ||


ಉರಗ ಕುಂಡಲಧರನಿಗೆ ಶಿವಗೆ |

ಭರಿತ ವಿನೋದಗೆ ಭಾರ್ಗವಗೆ |

ಮಾರಹರ ಮಿತ್ರಗೆ ಮುನಿಜನ ಪೋಷಗೆ |

ಪರಮೇಶ್ವರಗೆ ಪರಾತ್ಪರಗೆ ||


ಜಯ ಮಂಗಳಂ ನಿತ್ಯ ಶುಭ ಮಂಗಳಂ ||


ಈಶ ಪರೇಶ ಸುರೇಶನಿಗೆ |

ದೋಷ ವರ್ಜಿತ ಗುಣಭೂಷಣಗೆ |

ಪೋಷಿಪ ಸುಜನರ ಘಾಸಿಪ ಕುಜನರ |

ಸಾಸಿರ ನಾಮದ ಶಂಕರಗೆ ||


ಜಯ ಮಂಗಳಂ ನಿತ್ಯ ಶುಭ ಮಂಗಳಂ ||


ಇಂದುಧರಗೆ ಕಾಲಾಂತಕಗೆ |

ಕಂದು ಗೊರಳಣಿಗೆ ನಿರ್ಮಲಗೆ |

ಕುಂದರ್ಪಹರನಿಗೆ ಕಪಾಲಧರನಿಗೆ |

ನಂದಿವಾಹನಗೆ ಸರ್ವೇಶನಿಗೆ ||


ಜಯ ಮಂಗಳಂ ನಿತ್ಯ ಶುಭ ಮಂಗಳಂ ||


ಮಂಗಳ ತಾವರೆ ಕಂಗಳ ರಂಗಗೆ |

ಮಂಗಳಾರತಿಯ ತಂದೆತ್ತಿದರು ||


ಜಯ ಮಂಗಳಂ ನಿತ್ಯ ಶುಭ ಮಂಗಳಂ ||

Comments

Popular Posts