ಎಲ್ಲಾರು ಮಾಡುವುದು

 

ಎಲ್ಲಾರು ಮಾಡುವುದು ಹೊಟ್ಟೆಗಾಗಿ 

ಗೇಣು ಬಟ್ಟೆಗಾಗಿ || ಪ ||


ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ || ಅ ಪ ||


ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ

ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ |

ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ |

ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ ||ಎಲ್ಲಾರು ||


ದೊರೆತನ ಮಾಡುವುದು ಹೊಟ್ಟೆಗಾಗಿ 

ಕರಿ  ತುರಗವೇರುವುದು ಹೊಟ್ಟೆಗಾಗಿ |

ದುರಿತವ ಮಾಡುವುದು ಹೊಟ್ಟೆಗಾಗಿ |

ಸಿರಿ  ಹರಿಯ ಭಜಿಸುವುದು ಮುಕ್ತಿಗಾಗಿ || ಎಲ್ಲಾರು ||


ಬೆಟ್ಟವ ಹೊರುವುದು ಹೊಟ್ಟೆಗಾಗಿ 

ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ |

ದಿಟ್ಟವಾಗಿ ನಮ್ಮ ಶ್ರೀ ಪುರಂದರ ವಿಠಲನ

ಧ್ಯಾನವ ಮಾಡುವುದು ಮುಕ್ತಿಗಾಗಿ || ಎಲ್ಲಾರು ||

Comments

Popular Posts