ಅರವಿಂದಾಲಯೇ ತಾಯೇ

 

ಅರವಿಂದಾಲಯೇ ತಾಯೇ 

ಶರಣು ಹೊಕ್ಕೆನು ಕಾಯೇ

ಸಿರಿ ರಮಣನ ಪ್ರಿಯೇ, ಜಗನ್ಮಾತೇ ||ಪ||


ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲವಿಮಲ ಶೋಭಿತೇ |

ಕಮನೀಯ ಹಸ್ತಪಾದ ಕಮಲ ವಿರಾಜಿತೇ 

ಕಮಲೇ ಕಾಯೇ ಎನ್ನನು, ಶ್ರೀ ಲಕುಮಿಯೇ ||ಅರವಿಂದಾಲಯೇ||


ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ |

ಧನ್ಯ ವಿರಾಜಿತೇ ಅಜಭಾವಾದಿಗಳ ಪ್ರಸನ್ನೇ 

ಕಾಯೇ ಎನ್ನನು, ಶ್ರೀ ಲಕುಮಿಯೇ ||ಅರವಿಂದಾಲಯೇ||


ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ |

ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ

ಚರಣಕಮಲವ ತೋರಿಸೆ, ಶ್ರೀ ಲಕುಮಿಯೇ ||ಅರವಿಂದಾಲಯೇ||

Comments

Popular Posts