ನಿನ್ನ ಭಕುತಿ ಬೀರೋ

 

ನಿನ್ನ ಭಕುತಿ ಬೀರೋ ದೇವ |

ಎನ್ನ ಮನ್ನಿಸಿ ಸಲಹುವರಾರೋ ||ಪ||


ಸನ್ನುತ ಸನ್ಮಾರ್ಗ ತೋರೋ ಪ್ರಪನ್ನ|

ರಕ್ಷಕಾ ಬೇಗ ಬಾರೋ ||ಅ.ಪ||


ಪನ್ನಗಶಯನ ಲಕ್ಷ್ಮೀರಮಣ 

ವೇದ ಸನ್ನುತ ಪದ ಸರ್ವೇಶ |

ಇನ್ನು ಬಿಡಿಸೊ ಮೋಹಪಾಶ

ಆಪನ್ನ ರಕ್ಷಕ ಶ್ರೀನಿವಾಸ ||ನಿನ್ನ||


ನಾರದ ಗಾನವಿಲೋಲ  

ಭೂರಿ ಭಕ್ತರ ಪರಿಪಾಲ |

ಭೂರಮಣ ಕರುಣಾಲವಾಲ 

ನೀರದಶ್ಯಾಮ ಗೋಪಾಲ ||ನಿನ್ನ||


ಕರಿರಾಜ ವರದಾ ಅಪ್ರಮೇಯ

ಅರಿತು ಪಾಲಿಸೊ ಯೋಗಿಧ್ಯೇಯ |

ಸುರಮುನಿ ಹೃದಯ ನಿಕಾಯ

ಗುರು ಪುರಂದರ ವಿಠಲ ರಾಯ ||ನಿನ್ನ||

Comments

Popular Posts