ರಂಗ ಬಾರೋ

 

ರಂಗ ಬಾರೋ, ಪಾಂಡುರಂಗ ಬಾರೋ  
ಶ್ರೀರಂಗ ಬಾರೋ, ನರಸಿಂಗ ಬಾರೋ ||ಪ ||

ಕಂದ ಬಾರೋ, ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ |
ಅಪ್ಪಬಾರೋ, ತಿಮ್ಮಪ್ಪ ಬಾರೋ 
ಕಂದರ್ಪನಯ್ಯನೆ ಕಂಚಿವರದ ಬಾರೋ ||ರಂಗ||

ಅಣ್ಣ ಬಾರೋ, ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿಯ ಚೆನ್ನ ಬಾರೋ |
ವಿಷ್ಣು ಬಾರೋ, ಉಡುಪಿ ಕೃಷ್ಣ ಬಾರೋ 
ಎನ್ನಿಷ್ಟಮೂರ್ತಿ ಪುರಂದರ ವಿಠಲ ಬಾರೋ ||ರಂಗ||

Comments

Popular Posts