ಬಿಡೆ ನಿನ್ನ ಪಾದವ

 

ಬಿಡೆ ನಿನ್ನ ಪಾದವ ಬಿಂಕವಿದೇಕೋ

ಕೊಡು ಮನದೀಷ್ಟವ ಕೋಪವಿದೇಕೋ ||ಪ||


ನೀರ ಪೊಕ್ಕರು ಬಿಡೆ, ಬೆನ್ನಿನೊಳಗೆ 

ಬಹುಭಾರ ಪೊತ್ತೆನೆಂದು ಬಿದ್ದರು ಬಿಡೆನು |

ಕೋರೆಯ ಮಸೆಯುತ ಕೊಸರಿ ಕೊಂಡರು ಬಿಡೆ |

ಘೋರರೂಪವ ತಾಳಿ ಘುರಿಘುರಿಸಲು ನಾನು ||ಬಿಡೆ||


ತಿರುಕನೆಂದರು ಬಿಡೆ ತಿಳಿದು ತಾಯ ಕೊರಳ

ತರಿಕನೆಂದರು ನಿನ್ನ ನಾ ಬಿಡೆನೋ |

ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ |

ಗರಳ ಮಡುವಿನಲಿ ಧುಮುಕಿದರೆಯು ನಾನು ||ಬಿಡೆ||


ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು

ಒಡನೆ ಹಯವೇರಿ ಓಡಿದರು ಬಿಡೆನು |

ಪೊಡವಿಯೊಳಗೆ ನಮ್ಮ ಪುರಂದರವಿಠಲನೆ |

ಕಡೆಹಾಯಿಸುವ ಭಾರ ನಿನ್ನದದಕೆ ನಾನು ||ಬಿಡೆ||


Comments

Popular Posts