ಹೊತ್ತು ಹೋಯಿತಲ್ಲಾ
ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ ।।ಪ।।
ಮತ್ತೆ ಮತ್ತೆ ಉನ್ಮತ್ತರ ಸಂಗದಿ
ಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಅ ಪ||
ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು |
ಭುಜಗಶಯನ ನಿನ್ನ ಭಜನೆಯ ಮಾಡುವ
ಸುಜನರ ಚರಣಾಂಬುಜವನೆ ಪಿಡಿಯದೆ ।।ಹೊತ್ತು।।
ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ |
ದೀನ ವಾತ್ಸಲ ನೀ ದೀನರಿಗಲ್ಲದಲೇ
ಹೀನಗುಣದವನಿಗೇನು ಗತಿಯೋ ಕೃಷ್ಣಾ ।।ಹೊತ್ತು।।
ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ದೊರಿಯೇ |
ಅರಘಳಿಗ್ಯಾದರೂ ಗುರುಶ್ರೀಶ ವಿಠ್ಠಲನ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ ।।ಹೊತ್ತು।।
Comments
Post a Comment