ಪಾಲಿಸು ಪಂಕಜದಳ ನಯನ

 

ಪಾಲಿಸು ಪಂಕಜದಳ ನಯನ 
ಪಾದಾಂಬುಧಿ ಶಯನ |
ಪಾಲಿಸು ಪಂಕಜದಳ ನಯನ ||ಪ||

ಪಾಲಿಸುಪರತರ ಪಾಲಿಪವರಸುರ 
ಪಾಲಿಸು ಪಾಲವ ಬಾಲಕ ಜಾಲನೆ ||ಅ ಪ||

ವೇದವ ಕದ್ದೊಯ್ದಾ ದಾನವನ ಸುಮಾತನಾ... ಮೀನಾ 
ಭೂಧರೆಯನು ಪಯೋಧಿಯೊಲೆತ್ತಿದ ಕೂರ್ಮ |
ಸಾಧಿಸುತಲಯ ಮೇದಿನಿ ಚೋರನ 
ಕಾದಿ ಸಂಹರಿಸಿದ ಆದಿ ವರಾಹನೇ ||ಪಾಲಿಸು||

ಬಾಲ ಪ್ರಹ್ಲಾದನು ಲೀಲೆಯೊಳು ನಿನ್ನನು ಕರೆಯೇ ಹರಿಯೇ 
ಲಾಲಿಸಿ ಮೊರೆ ದೈತ್ಯಾಲಯ ಕಂಬದಿ ಬಂದೆ |
ಮೇಲೆ ದನುಜಕುಲಪಾಲನ ಸೀಳಿದ 
ಜ್ವಾಲಾಮಲ ಕರಾಳ ನರಸಿಂಹನೇ ||ಪಾಲಿಸು||

ಪೃಥುವೀ ಅಡಿ ಮೂರಿಡಲೆನ್ನುತ ಕೈನೀಡಿ ಬೇಡಿ 
ಕೊಡಲಾತನು ತಾನಾಡಿದ ನಿಡುತ ಪಾಡಿ |
ಜಡಿದು ಬಲಿಯ ಶಿರ ಕೆಡಹಿದ ವಾಮನ 
ಕೊಡಲಿ ಪಿಡಿದ ಜಗದೊಡೆಯ ಶ್ರೀರಾಮನೆ  ||ಪಾಲಿಸು||

ಆ ರಾವಣ ಸಂಹಾರ ಸುಗುಣಾಧಾಮ ರಾಮ 
ಮಾರಾಜನಕ ಶೃಂಗಾರ ಜರಾಹರಿ ಕೃಷ್ಣ |
ಸಾರಾಸಾರ ವಿಚಾರ ಪ್ರಬುದ್ಧನೆ
ನಾರಾಯಣ ಸಂಹಾರಕ ಕಲ್ಕ್ಯನೆ ||ಪಾಲಿಸು||

Comments

Popular Posts