ಶರಣು ಬೆನಕನೆ

 

ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ   ||ಪ||

ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ  ||ಅ ಪ||        

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ |
ಏಕವಿಂಶತಿ ಪತ್ರಪೂಜಿತ ಅನೇಕ ವಿಘ್ನ ವಿನಾಯಕ        ||ಶರಣು||

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ |
ಕಂಬುಕಂಧರ ಇಂದುಮೌಳಿಜ ಚಂದನ ಚರ್ಚಿತಾಂಗನೇ   ||ಶರಣು||

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ |
ದಾಸ ಪುರಂದರವಿಠ್ಠಲೇಶನ ಈಶಗುಣಗಳ ಪೊಗಳುವೆ        ||ಶರಣು|| 

Comments

Popular Posts