ಶಿವ ಶಿವ ಎಂದರೆ
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ |
ಶಿವ ನಾಮಕೆ ಸಾಟಿ ಬೇರಿಲ್ಲ ||ಪ||
ಶಿವ ಭಕ್ತನಿಗೆ ನರಕಾ ಇಲ್ಲ |
ಜನುಮ ಜನುಮಗಳ ಕಾಟವು ಇಲ್ಲ ||ಅ ಪ||
ಅನ್ನದಾನವ ಮರೆಯದಿರು
ನಾನು ನನ್ನದು ಎನ್ನದಿರು |
ಉನ್ನತಿ ಸಾಧಿಸೆ ಹಗಲಿರುಳು
ದೀನಾನಾಥನ ಮರೆಯದಿರು || ಶಿವ ಶಿವ ||
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ |
ಕಾಯಕ ಮಾಡುತ ಎಂದೆಂದೂ
ಆತ್ಮಾನಂದವ ಪಡೆಯುತಿರು || ಶಿವ ಶಿವ ||
ದಾನವೆ ಜಗದೊಳು ತಪವಯ್ಯ
ಧ್ಯಾನವೆ ಘನತರ ಜಪವಯ್ಯ |
ಅಪಕಾರವ ನೀ ಮಾಡಿದರೆ
ಕೈಲಾಸವದು ಸಿಗದಯ್ಯ || ಶಿವ ಶಿವ ||
Comments
Post a Comment