ನೀನೆ ಅನಾಥಬಂಧು

 

ನೀನೆ ಅನಾಥಬಂಧು ಕಾರುಣ್ಯ ಸಿಂಧು ||ಪ||

ಮದಗಜವೆಲ್ಲ ಕೂಡಿದರೇನು 
ಅದರ ಸಮಯಕ್ಕೆ ಒದಗಲಿಲ್ಲ |
ಮದನನಯ್ಯ ಮಧುಸೂಧನ ಎನ್ನಲು
ಮುದದಿಂದೊದಗಿದೆಯೊ ಕೃಷ್ಣಾ ||ನೀನೆ||

ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ |
ಗತಿನೀನೇ ಮುಕುಂದಾ ಎನ್ನಲು
ಅತಿವೇಗದಿ ಅಕ್ಷಯವನಿತ್ತೆ ಕೃಷ್ಣಾ  ||ನೀನೆ||

ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯನಿತ್ತೆ |
ಸುಲಭದಿ ಭಕ್ತರ ಸಲಹುವ ನಮ್ಮ 
ಚೆಲುವ ಪುರಂದರ ವಿಠ್ಠಲರಾಯ ||ನೀನೆ|| 

Comments

Popular Posts