ಹರಿ ನಾರಾಯಣ
ಹರಿ ನಾರಾಯಣ ಹರಿ ನಾರಾಯಣ
ಹರಿ ನಾರಾಯಣ ಎನು ಮನವೆ ||ಪ||
ನಾರಾಯಣನೆಂಬ ನಾಮದ ಬೀಜವ
ನಾರದ ಬಿತ್ತಿದ ಧರೆಯೊಳಗೆ ||ಅಪ||
ತರಳ ಧೃವನಿಂದ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕೆ ಆಯ್ತು |
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರುಪಿತಾಮಹನಿಂದ ಹೂವಾಯ್ತು ||ಹರಿ||
ವಿಜಯನ ಸತಿಯಿಂದ ಕಾಯಾಯ್ತು ಅದು
ಗಜೇಂದ್ರನಿಂದ ದೊರೆ ಹಣ್ಣಾಯ್ತು |
ಶ್ರೀ ಶುಕಮುನಿಯಿಂದ ಪರಿಪಕ್ವವಾಯಿತು
ಅಜಮಿಳ ತಾನುಂಡು ರಸಸವಿದ ||ಹರಿ||
ಕಾಮಿತ ಫಲವೀವ ನಾಮವೊಂದಿರಲಾಗಿ
ಹೋಮ ನೇಮ ಜಪ ತಪವೇಕೆ |
ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ
ನೇಮದಿಂದಲಿ ನೀ ನೆನೆ ಮನವೆ ||ಹರಿ||
Comments
Post a Comment