ರಾಮಲಿಂಗ ಎನ್ನಂತರಂಗ

 

ರಾಮಲಿಂಗ ಎನ್ನಂತರಂಗ
ಮಂಗಳಾಂಗನೆ ಸರ್ವೋತ್ತುಂಗನೇ ||ಪ||

ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ |
ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ
ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||ರಾಮಲಿಂಗ||

ಘನ ವಿದ್ಯಾತುರಗೆ ಮಂತ್ರ ಕಲಾಪವೇ?
ಧನಪತಿಯ ಸಖಗೆ ಕೈಕಾಣಿಕೆಯೇ |
ಮನೆ ರಜತ ಪರ್ವತಗೆ ಫಣಿಯ ಆಭರಣವೇ
ಮನೋ ನಿಯಾಮಕಗೆ ಎನ್ನ ಬಿನ್ನಹವೇ ||ರಾಮಲಿಂಗ||

ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ
ಗೌರಿಯ ರಮಣಗೆ ಈ ಸ್ತ್ರೋತ್ರವೇ |
ವೀರ ರಾಘವ ವಿಜಯ ವಿಠಲನ ನಿಜ ಹಸ್ತ
ವಾರಿಜ ದಳದಿಂದ ಉದ್ಭವಿಸಿದಂತ ||ರಾಮಲಿಂಗ|| 

Comments

Popular Posts