ಹರಿಯ ಭಜನೆ ಮಾಡೋ

 

ಹರಿಯ ಭಜನೆ ಮಾಡೋ ನಿರಂತರ |
ಪರಗತಿಗಿದು ನಿರ್ಧಾರ ನೋಡೊ ||ಪ||

ಮೊದಲೆ ತೋರುತದೆ ಮಧುರ ವಿಷಯ ಸುಖ |
ಕಡೆಯಲ್ಲಿ ದುಃಖ ಅನೇಕ ||ಹರಿಯ||

ವೇದಶಾಸ್ತ್ರಗಳನೋದಿದರೇನು
ಸಾಧನೆಗಿದು ನಿರ್ಧಾರ  |
ಸಾರವೋ ಬಹು ಸಂಸಾರ ವಿಮೋಚಕ |
ಸೇರೋ ಶ್ರೀಹಯವದನನ್ನ  ||ಹರಿಯ|| 

Comments

Popular Posts