ಶರಣು ಶರಣಯ್ಯ
ಶರಣು ಶರಣಯ್ಯ ಶರಣು ಬೆನಕಾ |
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕಾ ||ಪ ||
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ |
ತಂದೆ ಕಾಯೋ ನಮ್ಮ ಕರಿಮುಖ ||ಅ ಪ||
ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಡೆಯೋದು ನೋಡೋಕೆ ಚೆನ್ನ |
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೇ ಕೈ ಹಿಡಿಯೋ ಮುನ್ನ ||ಶರಣು ||
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ |
ನೀಡಯ್ಯಾ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯಾ ಪ್ರೀತಿ ||ಶರಣು ||
Comments
Post a Comment