ತಾಯಿ ಶಾರದೆ

 

ತಾಯಿ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೆ |

ಪ್ರೇಮದಿಂದಲಿ ಸಲಹು ಮಾತೆ

ನೀಡು ಸನ್ಮತಿ ಸೌಖ್ಯದಾತೆ ||ಪ||


ಅಂಧಕಾರವ ಓಡಿಸು

ಜ್ಞಾನಜ್ಯೋತಿಯ ಬೆಳಗಿಸು |

ಹೃದಯ ಮಂದಿರದಲ್ಲಿ ನೆಲೆಸು

ಚಿಂತೆಯ ಅಳಿಸು, ಶಾಂತಿಯ ಉಳಿಸು ||ತಾಯಿ||


ನಿನ್ನ ಮಡಿಲಿನ ಮಕ್ಕಳಮ್ಮ

ನಿನ್ನ ನಂಬಿದ ಕಂದರಮ್ಮ |

ನಿನ್ನ ಕರುಣೆಯ ಬೆಳಗಲಮ್ಮ

ಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ ||ತಾಯಿ||


ಒಳ್ಳೆ ಮಾತುಗಳಾಡಿಸು

ಒಳ್ಳೆ ಕೆಲಸವ ಮಾಡಿಸು |

ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯ ಕಲಿಸು, ಆಸೆ ಪೂರೈಸು ||ತಾಯಿ||

Comments

Popular Posts