ವಂದೇ ಶಾರದೆ
ವಂದೇ ಶಾರದೆ ವೀಣಾಧಾರಿಣಿ ಮಾತೇ |
ವೀಣಾಧಾರಿಣಿ ಮಾತೇ ||ಪ||
ಪುಸ್ತಕ ಪಾಣಿಯೇ ವಿದ್ಯೆಯ ನೀಡೆ |
ಬುದ್ಧಿಯ ಕರುಣಿಸು ತಾಯೇ , ಬುದ್ಧಿಯ ಕರುಣಿಸು ತಾಯೇ ||ವಂದೇ||
ಬ್ರಹ್ಮನ ರಾಣಿಯೇ, ಕರುನಾನಿಧಿಯೇ |
ಕರಗಳ ಮುಗಿಯುವೆ ತಾಯೇ, ಕರಗಳ ಮುಗಿಯುವೆ ತಾಯೇ ||ವಂದೇ||
ಭಕ್ತರ ಮಾತೇ, ಲೋಕ ವಿಖ್ಯಾತೆ |
ಅಪರಾಧ ಕ್ಷಮಿಸು ತಾಯೇ , ಅಪರಾಧ ಕ್ಷಮಿಸು ತಾಯೇ ||ವಂದೇ||
ಭಕ್ತರ ಪಾಲಿಸಿ ಮುಕ್ತಿಯ ನೀಡೇ |
ಶೃಂಗೇರಿ ಪುರ ನಿಲವಾಸಿ, ಶೃಂಗೇರಿ ಪುರ ನಿಲವಾಸಿ ||ವಂದೇ||
Comments
Post a Comment