ವರವ ಕೊಡು ಎನಗೆ
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣಕಮಲಂಗಳನ ದಯಮಾಡು ದೇವಿ ||ಪ||
ಶಶಿ ಮುಖದ ನಸುನಗೆಯ ಬಾಲೆ
ಎಸೆವ ಕರ್ಣದಿ ಮುತ್ತಿನೋಲೆ |
ನಸುನಗುವ ಸುಲಿಪಲ್ಲ ಗುಣಶೀಲೆ, ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು ||ವರವ||
ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿ ನಾಸಿಕದ ರಂಭೆ |
ಜೋಂಪು ಮದನನ ಪೂರ್ಣಶಕ್ತಿ ಗೊಂಬೆ
ಸಂಪಿಗೆಯ ಮುಡಿಗಿಟ್ಟ ಶಾರದಾಂಬೆ ||ವರವ||
ರವಿಕೋಟಿ ತೇಜಪ್ರಕಾಶೆ
ಕವಿಜನರ ಹ್ರಿತ್ಕಮಲ ವಾಸೇ |
ಅವಿರಳಾಪುರಿಯ ಸಿರಿಕಾಗಿನೆಲೆಯಾದಿ
ಕೇಶವನ ಸುತಗೆ ಸನ್ನುತದ ರಾಣಿವಾಸೆ ||ವರವ||
Comments
Post a Comment