ತೂಗಿರೆ ರಾಯರ
ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯಕಿಕುಲ ತಿಲಕರ ||ಪ||
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರು ರಾಘವೇಂದ್ರ ರ ||ಅಪ||
ಕುಂದನ ಮಯವಾದ ಚಂದದ ತೊಟ್ಟಿಲೊಳ್
ಆನಂದದಿ ಮಲಗ್ಯಾರ ತೂಗಿರೆ |
ನಂದನ ಕಂದ ಗೋವಿಂದ ಮುಕುಂದನ
ಚಂದದಿ ಭಜಿಪರ ತೋಗಿರೆ ||ತೂಗಿರೆ ||
ಯೋಗ ನಿದ್ರೆಯಾನ ಬೇಗನೆ ಮಡುವ
ಯೋಗಿಶ್ಯ ವಂದ್ಯರ ತೂಗಿರೆ |
ಭೋಗಿಶಯನನ ಪಾದ
ಮೋದದಿ ಭಜಿಪರ ಭಾಗವತರನ್ನ ತೂಗಿರೆ ||ತೂಗಿರೆ ||
ಅದ್ವೈತ ಮತದ ವಿದ್ವಂಸದ ನಿಜ ಗುರು
ಮಧ್ವಮತೋದ್ಧಾರನ ತೂಗಿರೆ |
ಶುದ್ದ ಸಂಕಲ್ಪದಿ ಬಂದ ನಿಜ ಭಕ್ತರ
ಉಧ್ಧಾರ ಮಾಳ್ಪರ ತೂಗಿರೆ ||ತೂಗಿರೆ ||
ಭಜಕ ಜನರು ತಮ್ಮ ಭಜಜೆಯ ಮಾಡಲು
ನಿಜ ಗತಿ ಇಪ್ಪರ ತೂಗಿರೆ |
ನಿಜ ಗುರು ಜಗನಾಥ ವಿಠಲನ ಪಾದವ
ಭಜನೆಯ ಮಾಳ್ಪರ ತೂಗಿರೆ ||ತೂಗಿರೆ ||
Comments
Post a Comment