ಸ್ವಾಮಿ ಮುಖ್ಯಪ್ರಾಣ
ಸ್ವಾಮಿ ಮುಖ್ಯಪ್ರಾಣ
ನಿನ್ನ ಮರೆವರ ಗಂಟಲ ಗಾನ ||ಪ||
ಹಿಡಿದ್ಯೊ ರಾಮನ ಚರಣ
ನೀನ್ ಹೌದವುದೋ ಜಗತ್ರಾಣ ||ಅ ಪ||
ಸಂಜೀವನ ಪರ್ವತವ, ನೀ ಅಂಜದೆ ತಂದ್ಯೊ ದೇವ |
ಅಂಜನೆ ಸುತ ಸದಾ ಕಾವ, ಹ್ರತ್ಕಂಜವಾಸ ಸರ್ವಜೀವ || ಸ್ವಾಮಿ||
ಏಕಾದಶಿಯ ರುದ್ರ, ನೀ ಒಯಿದ್ಯೊ ರಾಮರ ಮುದ್ರ |
ಸಕಲವಿದ್ಯಾ ಸಮುದ್ರ , ನೀ ಹೌದವುದೋ ಭಲಭದ್ರಾ ||ಸ್ವಾಮಿ||
ವೈಕುಂಠದಿಂದ ಬಂದು, ನೀ ಪಂಪಾ ಕ್ಷೇತ್ರದಿ ನಿಂದು |
ಯಂತ್ರೋಧ್ಧಾರಕನೆಂದು , ಪುರಂದರವಿಠ್ಠಲ ಸಲಹೆಂದು ||ಸ್ವಾಮಿ||
Comments
Post a Comment