ಅಂಜಿಕಿನ್ಯಾತಕಯ್ಯ

 

ಅಂಜಿಕಿನ್ಯಾತಕಯ್ಯ ಸಜ್ಜನರಿಗೆ

ಭಯವು ಇನ್ಯಾತಕಯ್ಯ                                  ॥ಪ॥


ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ         ॥ಅ.ಪ॥


ಕನಸಿಲಿ ಮನಸಿಲಿ ಕಳವಳವಾದರೆ

ಹನುಮನ ನೆನೆದರೆ ಹಾರಿಹೋಗದೆ ಭೀತಿ          ॥೧॥


ರೋಮ ರೋಮಕೆ  ಕೋಟಿ ಲಿಂಗವುದುರಿಸಿದ

ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ           ॥೨॥


ಪುರಂದರವಿಠಲನ ಪೂಜೆಯ ಮಾಡುವ

ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ     ॥೩॥

Comments

Popular Posts