ಇಂಥ ಪ್ರಭುವ ಕಾಣೆನೋ
ಇಂಥ ಪ್ರಭುವ ಕಾಣೆನೋ, ಈ ಜಗದೊಳಗಿಂಥ ಪ್ರಭುವ ಕಾಣೆನೋ ||ಪ||
ಇಂಥ ಪ್ರಭುವ ಕಾಣೆ, ಶಾಂತ ಮೂರುತಿ
ಜಗದಂತ ರಂಗನು, ಲಕ್ಷ್ಮಿ ಕಾಂತ ಸರ್ವಂತರ್ಯಾಮಿ || ಅ ಪ||
ಬೇಡಿದ ವರ ಕೊಡುವ, ಭಕ್ತರ ತಪ್ಪು ನೋಡದೆ ಬಂದು ಪೊರೆವ |
ಗಾಡಿಕಾರನು ಗರುಡಾರೂಢ ಗುಣವಂತ ಮಹ ಪ್ರೌಢ ಪ್ರತಾಪ ಜಗದಿ ಗೂಢದಿಂ ಸಂಚರಿಪ |
ಹಾಡಿ ಪೊಗಳಿ ಕೊಂಡಾಡುವವರ ಮುಂದಾದುತಲಿರ್ಪನು ನಾಡೊಳಗಿದ್ದರು
ಕೇಡಿಗನೆ ನಾಡಾದಿಗಳಂದದಿ ಈಡುಂಟೇನೋ ಈ ವೇಂಕಟಗೆ ||ಇಂಥ||
ನಿಗಮ ತತಿಗಳ ಅರಿಯದ , ನೀರಜಭವಾದ್ಯಗಣಿತ ಸುರರು ಕಾಣದ |
ಜಗದೊಡೆಯನು ಭಕ್ತರುಗಳಿಗೊಲಿದು ತ್ರಿಸ್ಥಾನಗಳತ್ಯಜಿಸಿ ಕಲಿಯುಗದಿ ಭೂಮಿಗೆ ಬಂದು |
ಅಗಣಿತ ಸುಗುಣಾರ್ಣವ ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚನ್ನಿಗನಿಂತಹನೊ ||ಇಂಥ||
ವಾರಿಜಾಸನ ಮನುಜ, ಈರ್ವರು ಸುತರು ಸುರತರಂಗಿಣಿ ತನುಜೆ |
ಪುರವೇ ವೈಕುಂಟ, ಇಂದ್ರಾಧ್ಯಮರರೇ ಕಿಂಕರರು
ಗರುಡ ವಾಹನ ಉರಗ, ಪರಿಯಂತ ನಿಷ್ಕಳಂಕ |
ಸರಿದೊರೆಗಳನಾನರಿಯೆನು ವೇಂಕಟ ಗಿರಿಯಲಿ ಮೆರೆಯುವ ಕರುಣಿಗಳರಸನೆ
ಮರೆಯದೆ ಸಲಹುವ ಶರಣಾಗತರನು ಮರುತಾಂತರ್ಗತ ವಿಜಯವಿಠಲ ||ಇಂಥ||
Comments
Post a Comment