ಎಲೆ ಮನ ಮುರಾರಿಯನೆ

 

ಎಲೆ ಮನ ಮುರಾರಿಯನೆ ಕೊಂಡಾಡು   ।।ಪ।।

ಸಾಧನಕಿದು ಉಪಾಯ ನೋಡು ।।ಅ.ಪ।।


ಕಾಲನ ದೂತರ ಕಾಲಿಗೆ ಬಿದ್ದರೆ

ನಾಳೆಗೆ ನಿಲುವರೆ ನೋಡೋ    ।।ಎಲೆ ಮನ।।


ಮಂದಿಯ ಮಾತಿಗೆ ಎಂದೆಂದು ಮರುಗದೆ

ಮುಂದಿನ ಗತಿ ನೀ ನೋಡೋ   ।।ಎಲೆ ಮನ।।


ರಾಜೀವಮುಖಿಯರ ಸೋಜಿಗೆ ಹೋಗದೆ

ವಿಜಯವಿಠಲನ ಪಾಡೋ  ಮನ   ।।ಎಲೆ ಮನ।।

Comments

Popular Posts