ಶಂಭೋ ಸ್ವಯಂಭು ಸಂಭವ
ಶಂಭೋ ಸ್ವಯಂಭು ಸಂಭವ, ನಂಬಿದೆ ಕಾಯೊ
ಜಂಭಾರಿನುತ ಅಭವ |
ಅಂಬರ ಪುರಹರ ಸಾಂಬ ತ್ರಿಯಂಬಕ
ಶಂಬರಾರಿ ರಿಪುಗಂಭೀರ ಕರುಣಿ || ಪ ||
ಭಸಿತ ಭೂಷಿತ ಶರೀರ, ಭಕ್ತರುದ್ಧಾರ
ವಿಷಕಂಠ ದುರಿತಹರ |
ಪಶುಪತಿ ಫಣಿಪಹಾರ, ಪಾವನಕಾರ
ತ್ರಿಶೂಲ ಡಮರುಗಧರ |
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ |
ಘಸಣೆಗೊಳಿಪ ತಾಮಸವ ಕಳೆದು
ಮಾನಸದಲಿ ರಂಗನ ಬಿಸಜ ಪಾದವ ತೋರೊ ||ಶಂಭೋ||
ರಜತ ಪರ್ವತ ನಿವಾಸ, ನಿರ್ಮಲ ಭಾಸ
ಗಜ ದೈತ್ಯನಾಶ ಗಿರೀಶ |
ಸುಜನರ ಮನೋವಿಲಾಸ, ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ |
ಅಜಸುತನಧ್ವರ ಭಜನೆಯ ಕೆಡಸಿದೆ
ಅಜಗರ ಮಂದಿ ಗಜಮುಖ ಜನಕನೆ |
ಗಜಗಮನ ಮುನಿ ತನುಜನ ಕಾಯ್ದನೆ
ವ್ರಜಮುನಿ ವಂದಿತ ಭಜಿಸುವೆ ನಿನ್ನನು ||ಶಂಭೋ||
ಮಧರಾಪುರಿ ನಿಲಯ, ಮೃತ್ಯುಂಜಯ
ಸದಮಲ ಸುಮನಗೇಯ |
ಸದಾ ನಮಿಪರ ಹೃದಯ, ದೊಳಗುಳ್ಳ
ಭಯಸದೆಯುತ್ತ ಕೊಡು ಅಭಯ |
ಸದಾಶಿವ ಜಾಹ್ನವಿ ಧರಕೃತ ಮಾಲಾ
ನದತೀರದಿ ವಾಸವಾಗಿಪ್ಪ ಸೌಂದರ್ಯ |
ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ||ಶಂಭೋ||
Comments
Post a Comment