ನಾನೇನ ಮಾಡಿದೆನೋ

 

ನಾನೇನ ಮಾಡಿದೆನೋ ರಂಗಯ್ಯ ರಂಗ

ನೀನೆನ್ನ ಕಾಯಬೇಕೋ || ಪ ||


ಮಾನಾಪಮಾನವು ನಿನ್ನದು ಎನಗೇನು

ದೀನರಕ್ಷಕ ತಿರುಪತಿಯ ವೆಂಕಟರಾಯ || ಅ ಪ ||


ರಕ್ಕಸಸೂದನನೇ ಕೇಳೋ

ಧ್ರುವರಾಯ ಚಿಕ್ಕವನಲ್ಲವೇನೋ | 

ಉಕ್ಕಿ ಬರುವ ಕರ್ಮ ಮಾಡಿದಜಮಿಳ 

ನಿಮ್ಮ ಅಕ್ಕನ ಮಗನೇನೋ  ||ನಾನೇನು ||


ಕರಿರಾಯ ಕರೆಸಿದನೆ 

ದ್ರೌಪದಾದೇವಿ ಬರೆದೋಲೆ ಕಳುಹಿದಳೆ  |

ಹರುಷದಿಂದಲಿ ಹೃಷಿ ಪತ್ನಿಯ ಶಾಪವ 

ಪರಿಹರಿಸಿದೆಯಲ್ಲೋ ಹೇ ಸ್ವಾಮಿ ||ನಾನೇನು ||


ಮುಪ್ಪಿಡಿಯವಲಕ್ಕಿಯ ತಂದವನಿಗೆ

ಒಪ್ಪುವಂತೆ ಕೊಡಲಿಲವೇ |

ಸರ್ಪಶಯನ ಶ್ರೀ ಪುರಂದರವಿಠಲ

ಅಪ್ರಮೇಯ ಕಾಯೋ ||ನಾನೇನು ||

Comments

Popular Posts