ಗೋಪಿಯ ಭಾಗ್ಯವಿದು

 

ಗೋಪಿಯ ಭಾಗ್ಯವಿದು 

ನಮ್ಮ ಶ್ರೀಪತಿ ತಾ  ಶಿಶು ರೂಪಿನಲಿರುವುದು ||ಪ||


ಕಡುಮುದ್ದು ರಂಗನ ತೊಡೆಯ ಮೇಲೆತ್ತುತ

ಜಡೆಯ ಹಣೆದು ಹೂ ಮುಡಿಸಿ ಬೇಗ |

ಬಿಡದೆ ಮುತ್ತಿನ ಚಂದರಳೆಲೆಯನ್ನು

ಸಡಗದಿಂತಾ ಅಲಂಕರಿಸಿದಳು ||ಗೋಪಿಯ||


ದೃಷ್ಟಿತಾಕಿತೆಂದು ಇಟ್ಟು ವಿಭೂತಿಯ

ತಟ್ಟೆಯೋಲಾರತಿಯ ಬೆಳಗುತಲಿ |

ಥಟ್ಟನೇ ಉಪ್ಪು ಬೇವು ನಿವಾಳಿಸಿ

ತೊಟ್ಟಿಲೊಳಿಟ್ಟು ತಾ ತೂಗಿದಳು ||ಗೋಪಿಯ||


ಎಮ್ಮಯ ರಂಗನೇ ಸುಮನಿರೋ ದೊಡ್ಡ 

ಗುಮ್ಮನು ಬರುವನೋ ಅಳಬೇಡ |

ಸುಮ್ಮನೆ ಇರು ನಿನಗೆ ಅಮ್ಮಿಯ ಕೊಡುವೆನೆಂದು 

ಬೊಮ್ಮನ ಪಿತನ ತಾ ತೂಗಿದಳೂ   ||ಗೋಪಿಯ||


ಮಾದವ ಜೋ ಮಧುಸೂದನ ಜೋಜೋ 

ಯಾದವರಾಯ ರಂಗನೇ ಜೋಜೋ |

ಆದಿ ಮೂರುತಿ ನಮ್ಮ ಪುರಂದರ ವಿಠಲನ

ಆದರದಿಂದಲಿ ತಾ ತೂಗಿದಳೂ ||ಗೋಪಿಯ||


Comments

Popular Posts