ಕಲಿಯುಗದೊಳು
ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವುವು ರಂಗಾ||ಪ||
ಸುಲಭದ ಭಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆಮನವೆ ||ಅ.ಪ||
ಸ್ನಾನವನರಿಯೆ ಮೌನವನರಿಯೆ
ಧ್ಯಾನವನರಿಯೆನೆಂದು ಎನಬೇಡ |
ಜಾನಕೀವಲ್ಲಭ ದಶರಥನಂದನ
ಗಾನವಿಲೋಲನ ನೆನೆಮನವೆ ||ಕಲಿಯುಗ||
ಜಪವೊಂದರಿಯೆ ತಪವೊಂದರಿಯೆ
ಉಪದೇಶವಿಲ್ಲೆಂದೆನಬೇಡ |
ಅಪಾರಮಹಿಮ ಶ್ರೀಪುರಂದರವಿಠಲನ
ಉಪಾಯದಿಂದಲಿ ನೆನೆಮನವೆ ||ಕಲಿಯುಗ||
Comments
Post a Comment