ಒಂದು ಬಾರಿ ಬಂದು ನೋಡಿ

 

ಒಂದು ಬಾರಿ ಬಂದು ನೋಡಿ ಮರೆಯದು ಜೀವಾ

ಮಂತ್ರಾಲಯ ದರುಶನವೇ ದಿವ್ಯ ಅನುಭವ ||ಪ||


ಭೂಮಿಯೊಳಗೆ ನಾದವೇ, ಮಂತ್ರಾಲಯ ತಾಣವೇ

ಇಹಕು ಪರಕು ಸೇತುವೆ, ಶ್ರೀ ರಾಘವೇಂದ್ರ ನಾಮವೇ ||ಒಂದು ಬಾರಿ||


ಪಾಪ ಕಳೆವ ಸುರಗಂಗೆ ಇಲ್ಲಿ ಹರಿವ ತುಂಗೆ

ಪ್ರೇಮ ಬರಿತ ಹೂಬನ ರಾಯರ ಬ್ರಂದಾವನ ||ಒಂದು ಬಾರಿ||


ಏಳು ನೂರು ವರುಷಗಳು ಗುರುಗಳು ಇಲ್ಲಿಹರು

ಭಕ್ತ ಕೋಟಿ ಬೇಡಿಕೆಯ ಪ್ರೀತಿಯಿಂದ ತರುವರು ||ಒಂದು ಬಾರಿ|| 

Comments

Popular Posts