ಕರುಣಿಸೋ ರಂಗ
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ, ರಂಗ ಕರುಣಿಸೋ||ಪ||
ಹಗಲು ಇರುಳು ನಿನ್ನ
ಸ್ಮರಣೆ ಮರೆಯದಂತೆ ||ಅ ಪ ||
ರುಕುಮಾಂಗದನಂತೆ ವ್ರತವ ನಾನರಿಯೆ |
ಶುಕಮುನಿಯಂತೆ ಸ್ತುತಿಸಲು ಅರಿಯೆ |
ಬಕವೈರಿಯಂತೆ ಧ್ಯಾನವ ಮಾಡಲರಿಯೇ|
ದೇವಕಿಯಂತೆ ಮುದ್ದಿಸಲರಿಯೆನೋ ಕೃಷ್ಣ ||ಕರುಣಿಸೋ||
ಗರುಡನಂದದಿ ಪೊತ್ತು ತಿರುಗಲು ಅರಿಯೆ |
ಕರಿಯಲು ಅರಿಯೆ ಕರಿರಾಜ ನಂತೆ |
ವರಕಪಿಯಂತೆ ದಾಸ್ಯವ ಮಾಡಲರಿಯೇ |
ಸಿರಿಯಂತೆ ನೆರೆದು ಮೋಹಿಸಲರಿಯೆನೋ ಕೃಷ್ಣ ||ಕರುಣಿಸೋ||
ಬಲಿಯಂತೆ ದಾನವ ಕೊಡಲು ಅರಿಯೆ |
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ |
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ |
ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ ||ಕರುಣಿಸೋ||
Comments
Post a Comment