ಎದ್ದು ಬರುತಾರೆ

 

ಎದ್ದು ಬರುತಾರೆ ನೋಡೆ, ಎದ್ದು ಬರುತಾರೆ   

ಮುದ್ದು ಬೃಂದಾವನ ಮಧ್ಯದೊಳಗಿಂದ ।।ಪ।।


ಕರದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು 

ಚೆಲುವ  ಮುಖದೊಳು ಪೊಳೆವ ದಂತಗಳಿಂದ    

ತಿದ್ದಿ ಹಚ್ಚಿದ ನಾಮ ಮುದ್ರೆಯೊಳು ಒಪ್ಪಿದಾ ರಾಯಾ    ।।ಎದ್ದು।। 


ಹೃದಯದಾ ಸದನದಲ್ಲಿ ಪದುಮನಾಭನ ಭಜಿಸಿ 

ಮುದಮನದಿಂದ ನಿತ್ಯಪದ ಕಮಲರೂಪ ತಾಳಿ      

ದಾತಗುರುಜಗನ್ನಾಥ ವಿಠಲನ ಪ್ರೀತಿಯ 

ಪಡಿಸುತ ದೂತರಪೊರೆಯುವಾ ರಾಯಾ ।।ಎದ್ದು।।

Comments

Popular Posts