ನಂದ ಕಿಶೋರ ನವನೀತ ಚೋರ
ನಂದ ಕಿಶೋರ, ನವನೀತ ಚೋರ, ಉಡುಪಿ ನಾಥ ಶ್ರೀ ಹರಿ ||ಪ||
ಶ್ಯಾಮಲ ಕೋಮಲ, ಕೃಷ್ಣ ಮುರಾರಿ, ಮೋಹನ ಮುರಳಿಧಾರಿ ||ಅ ಪ||
ನಗೆ ಬೆಳದಿಂಗಳ ಚೆಲ್ಲುತನಿಂದ, ಭಕುತರ ಕಾಯುವ ಗೋವಿಂದ |
ನಲಿಯುತ ಗೋಪಿಯರೆಲ್ಲರ ಕೂಡಿ, ಆಡುತ ನೀಡುವ ಆನಂದ |
ಹಸುಕರು ಕೂಗಲು, ತವಕದಿ ಓಡುವ, ಹಸುಳೆಯ ತೆರದಿ ಮುಕುಂದಾ ||ನಂದ ಕಿಶೋರ||
ಕಂಸನ ಕಂಡು, ಕಿಡಿಮಿಡಿಗೊಂಡು, ಧ್ವ0ಸವ ಮಾಡಿದ ಅಸುರಾರಿ |
ಕನಕನ ಕಂಡು, ಬಲು ಮುದಗೊಂಡು, ಕಿಂಡಿಯಲಿಣಿಕಿದ ದಯೆ ತೋರಿ |
ಕನ್ನಡ ನೆಲದಲ್ಲಿ, ನಲೆಸಿದ ನಮ್ಮ ಕರುಣಾಸಾಗರ ಶ್ರೀಹರಿ ||ನಂದ ಕಿಶೋರ||
Comments
Post a Comment