ಆದಿ ಲಕ್ಷ್ಮಿ ದೇವಿಗೆ

 

ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ ||ಪ||

ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ |
ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ ||ಅ ಪ||

ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ |
ಭಾಗ್ಯದಾಯಿ ಮಾಂಗಲ್ಯಾ ಸೌಭಾಗ್ಯವ ನೀಡಮ್ಮ||
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತೋರಮ್ಮ |
ಧನ ಧಾನ್ಯವ ಕೊಟ್ಟು ಸಂತಾನ ಕರುಣಿಸಮ್ಮ ||ಆದಿ ಲಕ್ಷ್ಮಿ||

ಕ್ಷೀರಭ್ಧಿತನಯೇ ಆನಂದನಿಲಯೇ ವಿಷ್ಣುಪ್ರಿಯೆ ಬಾರೆ |
ಕಮಲನಯನೇ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ || 
ಪುಷ್ಪಸುಗಂಧಿನಿ ಹರಿಣ ವಿಲೋಚನಿ ಕರುಣೆಯನ್ನು ತೋರೆ |
ಅನಂತ ರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವ ನೀ ತಾರೆ ||ಆದಿ ಲಕ್ಷ್ಮಿ|| 

Comments

Popular Posts