ಗಿರಿರಾಯಾ ಗಿರಿರಾಯ
ಗಿರಿರಾಯಾ ಗಿರಿರಾಯ ಗಿರಿರಾಯಾ ಗಿರಿರಾಯ I
ಶರಣಾಗತ ಕರುಣಾಕರ ವೆಂಕಟ IIಪII
ಸ್ಮರಿಸುವೆ ನಿನ್ನನು ಸರಸಿಜ ಭವನುತ
ಸ್ಮರತಾಮರತರು ದುರಿತವಿದೂರಾ I
ಶ್ರೀಕರ ಭವ ಭಯ ನೂಕಿಸಿ ಎನನ್ನು
ಸಾಕೆಲೂ ಭೂಧರ ಸುಕರರೂಪ IIಗಿರಿರಾಯಾII
ಆಪತ್ ಭಾಂದವ ಶ್ರೀಪತಿ ಎನನ್ನು
ಕಾಪಡೆಲೊ ಆಪದ್ಧರ ವೆಂಕಟ I
ಕಾಮಿತ ಫಲಪ್ರದ ಈ ಮಹಿತಳದೊಳು
ಸಾಮಾಜ ವರದ ಸುಧಾಮನ ಸಖ ಪೊರಿ IIಗಿರಿರಾಯಾII
ದಾತನೆ ಗುರು ಜಗನ್ನಾಥ ವಿಠಲ
ಪ್ರೀತನಾಗೋ ನಿನ್ನ ದೂತನು ನಾನೈ I
ದಾತನೆ ಗುರು ಜಗನ್ನಾಥ ವಿಠಲ
ಪ್ರೀತನಾಗೋ ನಿನ್ನ ದೂತನು ನಾನೈ IIಗಿರಿರಾಯಾII
Comments
Post a Comment